Index   ವಚನ - 10    Search  
 
ಮುಗ್ಧ ಮೂಢ ಕುಬ್ಜ ಕುಷ್ಠ ಅಂಧಕ ಪಂಗುಳ ನಪುಂಸಕ ಇಂತೀ ಮುಕ್ತಿಹೀನರ ದೈವವೆಂದು ಇಕ್ಕಿ ಎರೆದು ಕೊಟ್ಟು ಕೊಂಡು ಮಾಡುವಾತ ಭಕ್ತನಲ್ಲ. ಅದು ಧಾತೃವರ್ಧನ ಸಂಬಂಧ. ಭಕ್ತಿಯಿಂದ ಮಾಡುವಲ್ಲಿ ತ್ರಿವಿಧ ಮಲವ ಹರಿದವನ, ತ್ರಿಗುಣ ಗುಣವರತವನ, ತ್ರಿಗುಣಾತ್ಮಕ ಭೇದಕನ; ಸರ್ವಸಂಗ ಪರಿತ್ಯಾಗವ ಮಾಡಿದ ಪರಮ ವಿರಕ್ತರ ತಥ್ಯ ಮಿಥ್ಯ ರಾಗದ್ವೇಷಂಗಳ ಸ್ವಪ್ನದೊಳಗೂ ಅರಿಯದವನ ಆತ ಗುರುವೆಂದು, ಆತ ಚರವೆಂದು ನಲಿದು ಮನ ಮುಕ್ತವಾಗಿ ಮಾಡುತ್ತಿರಬೇಕು. ಇದು ಸದ್ಭಕ್ತರ ಅರಿವಿನ ಕುರುಹಿನ ಮಾಟ. ಆತ ವ್ಯಾಪಾರದ ಕೂಗಿನ ದನಿಗೆ ಹೊರಗು ಮಹಾಮಹಿಮ ಮಾರೇಶ್ವರಾ.