Index   ವಚನ - 7    Search  
 
ಧರೆ ಸಲಿಲ ಅನಲ ರವಿ ಶಶಿ ಜಗಸೂತ್ರವೆಲ್ಲಕ್ಕೂ ಸರಿ. ಅರಿದವನ ಚಿತ್ತದ ದಯೆ ಸರ್ವಪ್ರಾಣಿಗಳಿಗೂ ಸರಿ. ದಯ ವಿಶ್ರಾಂತಿ ಇದು ಮಿಥ್ಯವಲ್ಲದೆ ತಥ್ಯವಲ್ಲದ ದಂತಶೂಕ ಶಿಲೆಯಲ್ಲಿ ನಿಂದಂತಾಗಬೇಡ, ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.