Index   ವಚನ - 27    Search  
 
ತ್ರಿಸಂಧಿಯಲ್ಲಿ ನಿಂದು, ತ್ರಿಗುಣಾತ್ಮನ ಕೊಂದು, ಕೆಲದಲ್ಲಿ ನಿಂದವನಾರೆಂಬುದ ತಿಳಿ. ತಿಳಿದು ನೋಡೆ ಅಯಿಗಡಲನಂಗ ಮೂರು ಮುಡಿಯವನ ಸಂಗ. ಬೇರೊಂದ ಹಿಡಿದು ನೋಡುವವನ ನಿಸ್ಸಂಗ. ತನ್ನತಾನರಿದಲ್ಲಿಯೆ ಕಾಣಬಂದಿತ್ತು. ಅದ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.