Index   ವಚನ - 30    Search  
 
ಪಂಚವಳಯ ವಿಸ್ತೀರ್ಣದಲ್ಲಿ ಕಟ್ಟಿದವು ಮೂರು ಪಟ್ಟಣ. ಕೆಲದಲ್ಲಿ ಹೊಲಗೇರಿ, ಬಲದಲ್ಲಿ ಮಾದಿಗರ ಮನೆ. ನಡುವೆ ಹೆಬ್ಬಾರುವರ ಮಹಾಜನಂಗಳ ಗುಡಿವಾಡ. ಹೊಲೆಯರ ಗೋವಧೆಯ ಮಾದಿಗರ ಮನೆಯ ನಾತ. ಹಾರುವರೂಟದ ಸುಖ ಲೇಸಾಯಿತ್ತು. ಜಗದ ಕೀಳು ಮೇಲಿನ ಕೂಟ ಅದೇತರಿಂದಾಯಿತ್ತು ಎಂಬುದ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.