Index   ವಚನ - 45    Search  
 
ನಿರ್ಮಲ ಜಲ ಸ್ಥಾನದಲ್ಲಿ ಇದ್ದಡೇನು ತಹುದಕ್ಕೆ ಘಟವಿಲ್ಲದ ಮತ್ತೆ? ಅರಿವಿನ ಮಾತ ಬರಿಕಾಯರು ನುಡಿದಡೇನು ಕುರುಹಿಲ್ಲದ ಮತ್ತೆ? ತನ್ನ ಸೀಮೆಯ ತಾನರಿದು ಅಲ್ಲಿಗೆಯಿದುವನಂತೆ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.