Index   ವಚನ - 55    Search  
 
ಚರ ಸ್ಥಾವರವಾದುದುಂಟೆ? ಮಹಾಸಮುದ್ರಕ್ಕೆ ಕೆರೆಯೇರಿಯುಂಟೆ? ಸುಖವ ಮಚ್ಚಿ ಅಖಿಳರೊಳಗಿದ್ದು ಸಕಲ ವಿರಹಿತರಾದ ಪರಿಯಿನ್ನೆಂತೊ? ಅದು ವಿಕಳರ ಮಾತು, ಮೂರಕ್ಷರಕ್ಕೆ ದೂರ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.