ಕಂಡವರಿಗೆ ದೇವರ ಕಟ್ಟುವ ಭಂಡ ಗುರುವಿನ ಇರವು
ಜಗಭಂಡೆ ಎದೆಯ ಕೊಟ್ಟು ಕಂಡ ಕಂಡವರ ಕೈಯಲ್ಲಿ ಎದೆಯ ಹೆಟ್ಟಿಸಿಕೊಂಬಂತೆ.
ಅಗಲಿ ಬೀಳುವ ಕಲ್ಲಿಗೆ ಹರಿದು
ತಲೆಯನೊಡ್ಡಿಸುವನಂತೆ.
ಆ ಬರಿಕಾಯನಲ್ಲಿ ಕಟ್ಟಿದ ಇಷ್ಟ
ತೊಟ್ಟಿಯ ಹುದುರಿನಲ್ಲಿ ಕಲ್ಲು ಸಿಕ್ಕಿದಂತಾಯಿತ್ತು.
ಅದು ಭ್ರಷ್ಟನ ಕೈಯ ಕಟ್ಟುಗೂಳು, ಉತ್ತಮರೊಲ್ಲರು.
ಆ ಚಿತ್ತವ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.