Index   ವಚನ - 66    Search  
 
ಭಕ್ತನಾದಲ್ಲಿ ದ್ರವ್ಯವ ಸವೆಸಿ ಮರ್ಮವನರಿಯದೆ ವ್ಯರ್ಥವಾಯಿತ್ತು. ಖ್ಯಾತಿಗೆ ಇಕ್ಕಿ ಕೊಟ್ಟು ಮಾಡುವಾತನ ಭಕ್ತನೆಂದಡೆ ವಾಸಿಯ ಮಾತಿಗೆ ಸತ್ತವನ ಪಾಶದಂತೆ ಆತನ ಮಾಟ. ಮಾಟವನರಿದುಣ್ಣಬೇಕು. ಸರ್ವವ ನೇತಿಗಳೆದ ನಿರ್ಮಲಗುರು. ಆತನ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.