Index   ವಚನ - 68    Search  
 
ಮಾಡಿ ಆಡಲೇತಕ್ಕೆ? ಸಲಹಿ ಕೊಲಲೇತಕ್ಕೆ? ಬಿತ್ತಿ ಕೀಳಲೇತಕ್ಕೆ? ಕಟ್ಟಿ ಒಡೆಯಲೇತಕ್ಕೆ? ಮಾಡಿ ಮಾಡಿ ಮನಗುಂದಿದವು ನೀಡಿ ನೀಡಿ ನಿಜಗುಂದಲುವ ಬೇಡ. ಆ ಮಾಟವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.