Index   ವಚನ - 80    Search  
 
ವಾರಿ ಸಲಿಲದಲ್ಲಿ ಒಂದು ಶರಧಿ ಹುಟ್ಟಿತ್ತು ಊರೆಲ್ಲರ ಉರುಳುತ್ತದೆ. ಆ ಉರುಳು ಕೊರಳ ಬೀರಿ ಬ್ರಹ್ಮನ ಉಸುರಡಗಿತ್ತು. ವಿಷ್ಣುವಿನ ಎಡೆಯಾಟ ಬಿಟ್ಟಿತ್ತು, ರುದ್ರನ ಹಣೆಗಿಚ್ಚು ದಳ್ಳುರಿ ಬೇವುತ್ತಿದೆ. ಅದ ನಂದಿಸುವರಿಲ್ಲ, ಮೂರರ ಬಿಂದುವನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.