Index   ವಚನ - 89    Search  
 
ಭಕ್ತನಾದಲ್ಲಿ ಆವ ಸೋಂಕು ಬಂದಡೂ ಭಾವಶುದ್ಧವಾಗಿರಬೇಕು. ಭಕ್ತಂಗಲ್ಲದೆ ತಾಕು ಸೋಂಕು ಮತ್ತೊಬ್ಬರಿಗೆ ಬಾರವು. ಬಿರಿದ ಕಟ್ಟಿದ ಬಂಟಂಗೆ ತಡಹಲ್ಲದೆ ಬರುಬರಿಗುಂಟೆ ಮನೆದಗಹು? ನಿಮ್ಮನರಿವಂಗೆ ಮರವೆ ಬಂದಡೆ ನಿಮ್ಮನರಿದು ತನ್ನ ತಾನರಿಯಬೇಕೆಂಬುದ ನಿನ್ನ ನೀ ತಿಳಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.