Index   ವಚನ - 92    Search  
 
ಉದಕ ನಾನಾ ವರ್ಣದಲ್ಲಿ ಬೆರಸಿ ಅವುಗಳ ಛಾಯಕ್ಕೆ ಭಿನ್ನಭಾವವಿಲ್ಲದೆ, ಆ ರೂಪಿಂಗೆ ದ್ರವವೊಡಲಾಗಿ ತೋರುವಂತೆ ಎನ್ನ ಸರ್ವಾಂಗದಲ್ಲಿ ತೋರುವ ತೋರಿಕೆ ನೀನಾಗಿ, ಮುಕುರವ ನೋಡುವ ನೋಟದಂತೆ ಒಳಗೆ ತೋರುವ ಇರವು, ಹೊರಗಳವನ ಪ್ರತಿರೂಪಿನಂತೆ ಎಲ್ಲಿಯೂ ನೀನಾಗಿ ನಾನರಿದು ಮರೆವುದಕ್ಕೆ ತೆರಪಿಲ್ಲ. ಹಾಗೆಂದಲ್ಲಿಯೆ ನಿನ್ನ ಉಳುಮೆ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.