Index   ವಚನ - 98    Search  
 
ಇಚ್ಛಾಶಕ್ತಿ ಹೋತಿಂಗೆ ಸತಿಯಾಹಲ್ಲಿ, ಕ್ರಿಯಾಶಕ್ತಿ ಕೋಡಗಕ್ಕೆ ಸತಿಯಾಹಲ್ಲಿ, ಜ್ಞಾನಶಕ್ತಿ ಬಳ್ಳುವಿನ ಬಾಗಿಲು ಕಾವಲ್ಲಿ ಇವರೆಲ್ಲರ ನೀ ನೋಡುತ್ತಿದ್ದೆ. ನೀ ನೋಡುವ ನೋಟ ತ್ರಿವಿಧ ನಾಶ. ಕೋಲಿನ ಶಾಂತನ ವೇಷ, ನಿನ್ನ ಕಾರುಣ್ಯವಾಸ, ಎನ್ನ ಭ್ರಾಂತಿನ ವೇಷ ನಾಶವಾಯಿತ್ತು. ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.