Index   ವಚನ - 103    Search  
 
ಬಿಸಿಲ ಮುಂದಣ ಮಂಜಿನಂತಾಯಿತ್ತು. ದಿಟದ ಮುಂದಣ ಸಟೆಯಂತಾಯಿತ್ತು. ಪುಣ್ಯದ ಮುಂದಣ ಪಾಪದಂತಾಯಿತ್ತು. ಯೋಗಿಯ ಮುಂದಣ ಸಂಸಾರದಂತಾಯಿತ್ತು. ಧೀರನ ಮುಂದಣ ಹೇಡಿಯಂತಾಯಿತ್ತು. ಉರಗನ ಮುಂದಣ ಭೇಕನಂತಾಯಿತ್ತು. ಹರಿಯ ಮುಂದಣ ಕರಿಯಂತಾಯಿತ್ತು. ವಿವೇಕದ ಮುಂದಣ ದುಃಖದಂತಾಯಿತ್ತು. ಪುಣ್ಯಾರಣ್ಯದಹನ ಭೀಮೇಶ್ವರನೆಂಬ ಸದ್ಗುರು ಕಾರುಣ್ಯವಾಗಲೊಡನೆ ಎನ್ನ ಸುತ್ತಿಹ ಪ್ರಪಂಚು ಸರ್ವವೂ ಓಡಿದವಯ್ಯಾ!