ಹುಸಿಯುಳ್ಳಾತ ಭಕ್ತನಲ್ಲ,
ಬಾಧೆಯುಳ್ಳಾತ ಜಂಗಮವಲ್ಲ,
ಆಸೆಯುಳ್ಳಾತ ಶರಣನಲ್ಲ.
ಇಂತಪ್ಪ ಆಸೆ ಹುಸಿ ಬಾಧೆಯ ನಿರಾಕರಿಸಿ ಇರಬಲ್ಲಡೆ–
ಗುಹೇಶ್ವರಾ ನಿಮ್ಮ ಶರಣ.
Transliteration Husiyuḷḷāta bhaktanalla,
bādheyuḷḷāta jaṅgamavalla,
āseyuḷḷāta śaraṇanalla.
Intappa āse husi bādheya nirākarisi iraballaḍe–
guhēśvarā nim'ma śaraṇa.
Hindi Translation धोखेबाज भक्त नहीं, पीडित जंगम नहीं,
आशावादी शरण नहीं।
ऐसे आशा-धोखा-पीडा अनादरकर रहनेवाला ही
गुहेश्वरा, तुम्हारा शरण ।
Translated by: Eswara Sharma M and Govindarao B N
Tamil Translation பொய்யுரைப்போன் பக்தனல்ல, விருப்பு வெறுப்புளோன் ஜங்கமனல்ல
ஆசையுடையோன் சரணனல்ல!
இந்த ஆசை, பொய், துன்பத்தைத்தவிர்த்து இருக்க
இயலுமெனின் குஹேசுவரனே. அவன் உன் சரணன்!
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಸೆಯುಳ್ಳಾತ = ವಿಷಯೋಪಭೋಗದ ಆಸೆ ಉಳ್ಳವ; ಜಂಗಮನಲ್ಲ = ನಿಜಜಂಗಮನಲ್ಲ; ಬಾಧೆಯುಳ್ಳಾತ = ಜಾತ್ಯಾದಿ ಭ್ರಮೆ ಹಾಗೂ ರಾಗ-ದ್ವೇಷಾದಿ ಕ್ಷೇಶವುಳ್ಳವ; ಭಕ್ತನಲ್ಲ = ನಿಜವಾದ ಭಕ್ತನಲ್ಲ; ಶರಣನಲ್ಲ = ನಿಜವಾದ ಪ್ರಸಾದಿಸ್ಥಲದ ಶರಣನಲ್ಲ; ಹುಸಿಯುಳ್ಳಾತ = ದಾಸೋಹವ ಮಾಡುವಲ್ಲಿ ವಂಚನೆಯುಳ್ಳವ;
Written by: Sri Siddeswara Swamiji, Vijayapura