ತನುವಿನ ಕೊರತೆಗೆ ಸುಳಿಸುಳಿದು,
ಮನದ ಕೊರತೆಗೆ ನೆನೆನೆನೆದು,
ಭಾವದ ಕೊರತೆಗೆ ತಿಳಿತಿಳಿದು,
ಶಬ್ದವ ಕೊರತೆಗೆ ಉಲಿದುಲಿದು,
ಗುಹೇಶ್ವರನೆಂಬ ಲಿಂಗವು ಮನದಲ್ಲಿ ನೆಲೆಗೊಳ್ಳದಾಗಿ!
Transliteration Tanuvina koratege suḷisuḷidu,
manada koratege nenenenedu,
bhāvada koratege tiḷitiḷidu,
śabdava koratege ulidulidu,
guhēśvaranemba liṅgavu manadalli nelegoḷḷadāgi!
Hindi Translation शरीर की कमी से जलावर्त से, मन की कमी से याद याद करके,
भाव की कमी से जान जानकर शब्द की कमी से बोल बोलकर,
गुहेश्वर, कहना लिंग मन में स्थिर नहीं होता ।
Translated by: Eswara Sharma M and Govindarao B N
Tamil Translation உடலின் இயலாமை சுழன்று சுழன்று,
மனத்தின் இயலாமை நினைத்து நினைத்து,
அறிவின் இயலாமை அறிந்தறிந்து,
சொல்லின் இயலாமை ஒலித்தொலித்து
குஹேசுவரனெனும் இலிங்கம்
மனத்திலே நிலைகொளுமோ!
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕೊರತೆ = ಅಪೂರ್ಣತೆ; ತನು = ಸ್ಥೂಲದೇಹ; ನೆಲೆಗೊಳ್ಳು = ಅನುಭವಕ್ಕೆ ಬರು; ಭಾವ = ವಸ್ತುವಿನ ಜ್ಞಾನಕ್ಕೆ ಸಾಧನವಾದ ಕರಣ, ಅಂತಃಕರಣ, ಬುದ್ದಿ; ಮನ = ಸಂಕಲ್ಪವಿಕಲ್ಪಾತ್ಮಕವಾದ ಅಂತರಿಂದ್ರಿಯ; ಮನದಲ್ಲಿ = ಅಂತರಂಗದಲ್ಲಿ; ಶಬ್ದ = ಅನುಭವಗಳ ಅಭಿವ್ಯಕ್ತಿ ಮಾಧ್ಯಮ;
Written by: Sri Siddeswara Swamiji, Vijayapura