Index   ವಚನ - 32    Search  
 
ಗಿಡ ಮರದ ಕುರುಬಿತ್ತಿಯ ಜವ್ವನದಂತೆ ನುಡಿಯಲರಿಯದ ಮುಗ್ಧೆಯಾಗಿರ್ದೆನವ್ವಾ. ಹಗಲನರಿಯದ ಜಕ್ಕವಕ್ಕಿಯಂತೆ ಮನ ಬಯಸುತ್ತಲಿರ್ದೆನವ್ವಾ. ಹಲವು ಕಾಲ ಎಲವದಮರನ ಸಾರಿರ್ದ ಗಿಳಿಯಂತಾದೆನವ್ವಾ. ಇಂದು ಮಹಾಲಿಂಗ ಗಜೇಶ್ವರದೇವನ ನೆರೆಯಲರಿಯದೆ ಇವರೆಲ್ಲರ ವಿಧಿಯ ಹೊತ್ತೆನವ್ವಾ.