Index   ವಚನ - 45    Search  
 
ನೇಹದ ಸನ್ನೆಯ ಮನವರಿಯಲೊಡನೆ ನೋಡಲಮ್ಮೆನವ್ವಾ. ಕಂಗಳಲಿ ಹಿಸುಣವ ಹೇಳಿಹನೆಂದು ನೋಡಲಮ್ಮೆನವ್ವಾ. ಕಜ್ಜಲ ಕಲಕಿದಡೆ ಕುರುಹಳಿದೀತೆಂದು ನೋಡಲಮ್ಮೆನವ್ವಾ. ಕಂಗಳಲಿ ಮಹಾಲಿಂಗ ಗಜೇಶ್ವರನೊಲವ! ಎನಗೆ ಕಲುದೇಹ, ತನಗೆ ಸುಖದ ಮೊದಲು ನೋಡವ್ವಾ.