Index   ವಚನ - 46    Search  
 
ನೇಹವೆಳದಾಯಿತ್ತಾಗಿ ನೋಟ ವಿಪುಳವಾಯಿತ್ತ ಕಂಡೆ. ಅಂಗದ ಕಳೆ ಕಂಗಳ ಮೋಹ ಎವೆಗೆವೆ ಸೈರಿಸದು. ಬೆಳಕಿನ ಮೇಲೆ ಕೆಂಪಡರಿತ್ತು. ಉದಕ ಪಲ್ಲಟ, ಮತ್ಸ್ಯ ಬೆನ್ನು ಬಸುರ ತೋರಿತ್ತು. ಮಾಗಿಯ ಕೋಗಿಲೆಯಂತೆ ಮೂಗನಾಗಿದ್ದೆನವ್ವಾ. ಮಹಾಲಿಂಗ ಗಜೇಶ್ವರನೊಲವಿಂದೆನಗೆ ರಣದಣಕನವ್ವಾ.