Index   ವಚನ - 47    Search  
 
ನೋಟಕ್ಕೆಯೂ ಕೂಟಕ್ಕೆಯೂ ಕಣ್ಣು ಮನವೆರಸವವ್ವಾ. ಅವ್ವಾ, ಕಂಗಳು ತಪ್ಪಿ ನೋಡಲಮ್ಮೆ; ಅಮ್ಮೆ ಕೇಳೆಲೆಯವ್ವಾ. ಅವ್ವಾ, ಕಿವಿಗಳ ತಪ್ಪಿ ಕೇಳಲಮ್ಮೆ; ಅಮ್ಮೆ ಕೇಳೆಲೆಯವ್ವಾ. ಅವ್ವಾ, ಕಲಿಗಳಾಗದಲ್ಲಿ ಸೋತಂತೆ. ತನು ಮನ ಧನದ ಭಂಗವಳಿದು ನೆರೆಯನವ್ವಾ ಮಹಾಲಿಂಗ ಗಜೇಶ್ವರನವ್ವಾ.