•  
  •  
  •  
  •  
Index   ವಚನ - 529    Search  
 
ತನು ಬತ್ತಲಿದ್ದರೇನೊ ಮನ ಶುಚಿಯಾಗದನ್ನಕ್ಕರ? ಮಂಡೆ ಬೋಳಾದಡೇನೊ, ಭಾವ ಬಯಲಾಗದನ್ನಕ್ಕರ? ಭಸ್ಮವ ಹೂಸಿದಡೇನೊ, ಕರಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ? ಇಂತೀ ಆಶೆಯ ವೇಷದ ಭಾಷೆಗೆ, ಗುಹೇಶ್ವರಾ ನೀ ಸಾಕ್ಷಿಯಾಗಿ ಛೀ ಎಂಬೆನು.
Transliteration Tanu battaliddarēno mana śuciyāgadannakkara? Maṇḍe bōḷādaḍēno, bhāva bayalāgadannakkara? Bhasmava hūsidaḍēno, karaṇādi guṇaṅgaḷanotti meṭṭi suḍadannakkara? Intī āśeya vēṣada bhāṣege, guhēśvarā nī sākṣiyāgi chī embenu.
Hindi Translation शरीर नग्न हो तो क्या, मन शुद्ध न होने तक ? सिर मुंडवाने से क्या, भाव शून्य हुए बिना ? भस्म धारण करने से क्या, करणादि गुणों को दबा जलाने तक ? ऐसी आशा वेष भाषा को गुहेश्वरा, तुम ही साथी हो छी कहूँगा। Translated by: Eswara Sharma M and Govindarao B N
Tamil Translation உடல்தூய்மை யுற்றாலென்ன மனம் தூய்மையடையா வரையில்? தலையை மழித்தாலென்ன உணர்வுகள் அழியா வரையில் திருநீற்றைத் தரித்தாலென்ன புலனியல்புகளைத் துகைத்துச் சுடும்வரையில்” இவ்விதம் ஆசையைத் துறக்காது, பகட்டு வேடதாரியின் சொற்களுக்கு உன் சாட்சியாக “சீ” என்பேன் குஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಶೆಯ ವೇಷ = ಆಶೆಯನ್ನು ಅಡಗಿಸಿದುದರ ಸಂಕೇತವಾಗಿರುವ ವೇಷ, ವಿರಾಗದ ವೇಷ; ಕರಣಾದಿಗುಣಂಗಳನು = ಇಂದ್ರಿಯವೃತ್ತಿಗಳನ್ನು; ತನು ಬತ್ತಲೆ = ತನುವಿನಲಿ ನಿರ್ವಿಕಾರ; ಬಯಲಾಗು = ಬರಿದಾಗು, ವೀತರಾಗಗೊಳ್ಳು; ಭಾಷೆ = ನಡೆ-ನುಡಿ; ಮಂಡೆ = ತಲೆ; ಮೆಟ್ಟಿಸುಡು = ನಿಗ್ರಹಿಸು, ಅಡಗಿಸು; ಶುಚಿ = ನಿರ್ವಿಕಾರ; ಹೂಸು = ಹಚ್ಚಿಕೊಳ್ಳು; Written by: Sri Siddeswara Swamiji, Vijayapura