•  
  •  
  •  
  •  
Index   ವಚನ - 530    Search  
 
ಭಸ್ಮವ ಹೂಸಿ ಬತ್ತಲೆಯಿದ್ದಡೇನು ಬ್ರಹ್ಮಚಾರಿಯೇ? ಅಶನವನುಂಡು ವ್ಯಸನವ ಮರೆದಡೇನು? ಬ್ರಹ್ಮಚಾರಿಯೆ? ಭಾವ ಬತ್ತಲೆಯಿರ್ದು ಮನ ದಿಗಂಬರವಾಗಿರ್ದಡೆ ಅದು ಸಹಜ ನಿರ್ವಾಣವು ಕಾಣಾ ಗುಹೇಶ್ವರಾ.
Transliteration Bhasmava hūsi battaleyiddaḍēnu brahmacāriyē? Aśanavanuṇḍu vyasanava maredaḍēnu? Brahmacāriye? Bhāva battaleyirdu mana digambaravāgirdaḍe adu sahaja nirvāṇavu kāṇā guhēśvarā.
Hindi Translation भस्म धारण कर नंगा रहे तो, क्या ब्रह्मचारी है ? अशन खाकर व्यसन भूले तो, क्या ब्रह्मचारी है? भाव नंगा होकर मन दिगंबर हो तो, वह सहज निर्वाण देखो गुहेश्वरा। Translated by: Eswara Sharma M and Govindarao B N
Tamil Translation ஆடையற்று திருநீற்றைத் தரித்தாலென்ன, பிரம்மச்சாரியே? பிச்சை எடுத்து உண்டு, துயரங்களற்றிருப்பிலென்ன பிரம்மச்சாரியே? உணர்வுகளைவென்று, மனத்தில் சங்கற் பங்களின்றியிருப்பின் அது இயல்பான பிரம்மநிலையன்றோ குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಶನ = ಭಿಕ್ಷಾನ್ನ; ನಿರ್ವಾಣ = ಭವಮುಕ್ತಸ್ಥಿತಿ, ಜೀವಭಾವವಡಗಿ ಶಿವಸಮರತಿಯನೈದಿದ ಅನುಭೂತಿ; ಬ್ರಹ್ಮಚಾರಿ = ಬಾಹ್ಯಾಂತರದಲ್ಲಿ ನಿರ್ವಿಕಾರನಾಗಿರುವವ, ಬ್ರಹ್ಮವನು ಅರಿತ ಅನುಭವಿ, ಶಿವಯೋಗಿ; ಬ್ರಹ್ಮಚಾರಿ = ಯಾವುದರ ಮೋಹದಲ್ಲಿಯೂ ಸಿಲುಕದ ನಿಶ್ಚಿಂತ ನಿರಾಮಯನಾದ ಜ್ಞಾನಿ; ಭಾವ ಬತ್ತಲೆಯಾಗು = ನಿರ್ಭಾವ ಹೊಂದು, ಅಹಂ-ಮಮಭಾವವಿರಹಿತನಾಗು; ಮನ ದಿಗಂಬರವಾಗು = ಸಂಕಲ್ಪ-ವಿಕಲ್ಪಗಳಿಂದ ಮುಕ್ತನಾಗು; ವ್ಯಸನ = ಸ್ರ್ತೀಮೋಹ, ದ್ಯೂತ, ಬೇಟೆ, ಮದ್ಯಪಾನ, ವಾಕ್ ಪಾರುಷ್ಯ, ದಂಡಪಾರುಷ್ಯ ಮತ್ತು ಅರ್ಥದೂಷಣೆ-ಎಂಬ ಸಪ್ತವ್ಯಸನಗಳು; Written by: Sri Siddeswara Swamiji, Vijayapura