Index   ವಚನ - 2    Search  
 
ಅರು ಹಿರಿಯರೆಲ್ಲರು ಕೋಡಗದ ದಾಡೆಯ ಸಂಚದ ಕೂಳನುಂಡು, ತಮ್ಮ ಸಂಚಾರದ ಸಂಚವನರಿಯದೆ, ಮುಂಚಿದರು ಕಾಲನ ನಾಲಗೆಗೆ. ಇಂತಿವರು ಸಂಚಿತ ಆಗಾಮಿ ಪ್ರಾರಬ್ಧದಲ್ಲಿ ಲಯಕಾರಣರು. ಲಯವಿರಹಿತ ನಾರಾಯಣಪ್ರಿಯ ರಾಮನಾಥನಲ್ಲಿ ಅವಿರಳವಾದ ಶರಣಂಗೆ.