ಆನರಿದ ಭಕ್ತಿತ್ರಯ ಎಂತುಟೆಂದಡೆ:
ತ್ರಿವಿಧ ಲಿಂಗ, ತ್ರಿವಿಧ ಗುರು, ತ್ರಿವಿಧ ಜಂಗಮ
ತ್ರಿವಿಧ ಪಾದೋದಕ, ತ್ರಿವಿಧ ಪ್ರಸಾದ, ತ್ರಿವಿಧ ಆತ್ಮ;
ತ್ರಿವಿಧ ಬುದ್ಧಿಯಲ್ಲಿ ತ್ರಿವಿಧ ಅರ್ಪಿತ
ತ್ರಿವಿಧ ಅವಧಾನಂಗಳಿಂದ
ತ್ರಿವಿಧ ಭೇದೋಪಭೇದಗಳಲ್ಲಿ ಎಚ್ಚತ್ತು,
ತ್ರಿವಿಧ ಗುಣದಲ್ಲಿ ತ್ರಿವಿಧವನರಿತು,
ತ್ರಿವಿಧ ಗುಣದಲ್ಲಿ ತ್ರಿವಿಧವ ಮರೆದು,
ಅರಿದೆ ಮರೆದೆನೆಂಬ ಈ ಉಭಯ ನಷ್ಟವಾಗಿ ನಿಂದುದೆ
ಸಾತ್ವಿಕ ಭಕ್ತಿ, ಸಜ್ಜನ ಯುಕ್ತಿ,
ನಾರಾಯಣಪ್ರಿಯ ರಾಮನಾಥಾ.
Art
Manuscript
Music
Courtesy:
Transliteration
Ānarida bhaktitraya entuṭendaḍe:
Trividha liṅga, trividha guru, trividha jaṅgama
trividha pādōdaka, trividha prasāda, trividha ātma;
trividha bud'dhiyalli trividha arpita
trividha avadhānaṅgaḷinda
trividha bhēdōpabhēdagaḷalli eccattu,
trividha guṇadalli trividhavanaritu,
trividha guṇadalli trividhava maredu,
aride maredenemba ī ubhaya naṣṭavāgi nindude
sātvika bhakti, sajjana yukti,
nārāyaṇapriya rāmanāthā.