Index   ವಚನ - 11    Search  
 
ಈಶ್ವರ ಲೀಲಾಮೂರ್ತಿಯಾಗಿ ಏಕಾದಶ ರುದ್ರಮೂರ್ತಿಯ ಭಾವಿಸುವಲ್ಲಿ ವಾದರುದ್ರನ ಕಳುಹಿದ ಬಿಜ್ಜಳನೆಂಬ ನಾಮವ ಕೊಟ್ಟು, ಕಾಲರುದ್ರನ ಕಳುಹಿದ ಭಕ್ತಿನಾಮವ ಕೊಟ್ಟು ಬಸವೇಶ್ವರನ, ಮಾಯಾಕೋಳಾಹಳನೆಂಬ ರುದ್ರನ ಕಳುಹಿದ ಪ್ರಭುನಾಮವ ಕೊಟ್ಟು, ಮತ್ಸರವೆಂಬ ನಾಮ ಗುಪ್ತಗಣೇಶ್ವರನೆಂಬ ನಾಮವ ತಾಳ್ದು ಬಪ್ಪುದಕ್ಕೆ ಮುನ್ನವೇ ಐಕ್ಯ. ಪ್ರಮಥರುಗಳು ಪ್ರಕಟವ ಮಾಡಲಿಕ್ಕೆ ಬಂದಿತ್ತು. ಎನಗೆ ಮರ್ತ್ಯದ ಭವ. ಭವ ಬಸವನಿಂದ ಹರಿವುದು. ನಾ ಬಿತ್ತಿದ ಬೆಳೆಯೆನಗೆ ಫಲಭೋಗವನಿತ್ತು ಎನ್ನ ಅವತಾರಭಕ್ತಿ ಇನ್ನೆಂದು ಮೀರವಪ್ಪುದು, ಅಚ್ಚುತಪ್ರಿಯ ರಾಮನಾಥಾ.