ಉದಕ ಒಂದಾದಡೆ ಕೂಟದ
ಗುಣದಿಂದ ಜಾತಿ ಉತ್ತರವಾಯಿತ್ತು.
ಹಾಲು ಹುಳಿ ಕಹಿ ಖಾರ ಇವು ಮೊದಲಾಗಿರೆ
ಅವರವರಲ್ಲಿ ಅವ ಬೆರಸಿದಡೆ
ಅವರವರ ಭಾವಕ್ಕೆ ತಕ್ಕಂತೆ
ಇಪ್ಪ ಜಲಭೇದದ ವಸ್ತು ನಿರ್ದೇಶ.
ಆನೆಯ ಮಾನದಲ್ಲಿ ಇರಿಸಬಹುದೆ?
ಕಿರಿದು ಘನದಲ್ಲಿ ಅಡಗುವುದಲ್ಲದೆ
ಘನ ಕಿರಿದಿನಲ್ಲಿ ಅಡಗುವುದೆ?
ಅಮೃತದ ಕೆಲದಲ್ಲಿ ಅಂಬಲಿಯುಂಟೆ?
ನಾರಾಯಣಪ್ರಿಯ ರಾಮನಾಥಾ.
Art
Manuscript
Music
Courtesy:
Transliteration
Udaka ondādaḍe kūṭada
guṇadinda jāti uttaravāyittu.
Hālu huḷi kahi khāra ivu modalāgire
avaravaralli ava berasidaḍe
avaravara bhāvakke takkante
ippa jalabhēdada vastu nirdēśa.
Āneya mānadalli irisabahude?
Kiridu ghanadalli aḍaguvudallade
ghana kiridinalli aḍaguvude?
Amr̥tada keladalli ambaliyuṇṭe?
Nārāyaṇapriya rāmanāthā.