Index   ವಚನ - 25    Search  
 
ಕಲ್ಲಿಯ ಗಂಟು, ಲಲನೆಯರ ಮೋಹ, ಪುಳಿಂದರ ವೇಷ, ಮಾರುತನ ಗ್ರಾಸ, ಇಂತಿವರ ಇರವು ಗುರುಮಾರ್ಗದ ಬೋಧೆ. ಜಲಚರ ಆಹಾರಕ್ಕೆ ಸಿಕ್ಕಿದ ಕೊರಳಿನ ವಿಧಿಯಂತೆ, ನೆರೆಗೆ ಇಲ್ಲದ ಗುರುವಿನ ಕೈದೊಡಕಿನ ಶಿಷ್ಯ ಅರಿವಿಂಗೆ ಬಡಿಹೋರಿಯಾದ. ಇಂತಿವ ಕಂಡು ನೊಂದ ಸಂದೇಹಿಗೆ ನೀ ಅಜಡನಾಗಿ ಎನ್ನ ಜಡವ ಉದ್ಧರವ ಮಾಡು ಸದ್ಗುರುಮೂರ್ತಿ ನಾರಾಯಣಪ್ರಿಯ ರಾಮನಾಥಾ.