ಕಾಯ ಕಾಯವ ನುಂಗಿ,
ಮನ ಮನವ ನುಂಗಿ,
ಘನ ಘನವ ನುಂಗಿ,
ತನ್ಮಯ ತದ್ರೂಪಾಗಿ ನಿಂದಲ್ಲಿ,
ವಿರಳವ ಅವಿರಳ ನುಂಗಿ,
ಸೆರಗುದೋರದ ಕುರುಹು
ಅವತಾರ ಸಾಧನ ಸಾಧ್ಯ ಗುಪ್ತನ ಭಕ್ತಿ,
ಮರ್ತ್ಯದ ಮಣಿಹ ಸಂದಿತ್ತು.
ವೃಷಭೇಶ್ವರ ಮಂದಿರಕ್ಕೆ ಬಂದು
ಎನ್ನ ಸಂದೇಹ ಸಂಕಲ್ಪವಂ ಬಿಡಿಸಿ
ಪ್ರಕಟವೆ ಕಡೆಯೆಂದು ಅಂದು
ಎಂದು ಬಂದುದು ಸಂದಿತ್ತು
ಅಂಗಪೂಜೆ ಲಿಂಗವೆ ಎಂಬುದಕ್ಕೆ
ಮುನ್ನವೆ ಐಕ್ಯ, ಅವಸಾನ
ರಾಮೇಶ್ವರಲಿಂಗದಲ್ಲಿ.
Art
Manuscript
Music
Courtesy:
Transliteration
Kāya kāyava nuṅgi,
mana manava nuṅgi,
ghana ghanava nuṅgi,
tanmaya tadrūpāgi nindalli,
viraḷava aviraḷa nuṅgi,
seragudōrada kuruhu
avatāra sādhana sādhya guptana bhakti,
martyada maṇiha sandittu.
Vr̥ṣabhēśvara mandirakke bandu
enna sandēha saṅkalpavaṁ biḍisi
prakaṭave kaḍeyendu andu
endu bandudu sandittu
aṅgapūje liṅgave embudakke
munnave aikya, avasāna
rāmēśvaraliṅgadalli.