Index   ವಚನ - 32    Search  
 
ಕಾಲವನರಿವುದಕ್ಕೆ ಕೋಳಿಯಾಯಿತ್ತು. ಋತುಕಾಲವನರಿವುದಕ್ಕೆ ಕೋಗಿಲೆಯಾಯಿತ್ತು. ಶಾಖೆಯ ಲಂಘನವನರಿವುದಕ್ಕೆ ಗೋಲಾಂಗುಲವಾಯಿತ್ತು. ಕರಣದ ಮರಣವನರಿವುದಕ್ಕೆ ಮಲತ್ರಯ ದೂರನಾದ ನಾರಾಯಣಪ್ರಿಯ ರಾಮನಾಥಾ.