Index   ವಚನ - 54    Search  
 
ಅಟ್ಟಿತ್ತೊಂದು, ಓಡಿತ್ತೊಂದು, ಮುಟ್ಟಿ ಹಿಡಿಯಿತ್ತೊಂದು. ಅಟ್ಟಾಟಿಕೆಯಲಿ ಅರಿದಾವುದು! ಹಸು ಮಾಣಿಕ್ಯವ ನುಂಗಿ ಬ್ರಹ್ಮೇತಿಗೊಳಗಾಯಿತ್ತು. ಮೂರ್ತಿಯಾದುದೆ ಅಮೂರ್ತಿಯಾದತ್ತು, ಅಮೂರ್ತಿಯಾದುದೆ ಮೂರ್ತಿಯಾದತ್ತು. ಇದನೆಂತು ತೆಗೆಯಬಹುದು? ಇದನೆಂತು ಕೊಳಬಹುದು! ಅಗಮ್ಯ, ಅಗೋಚರ. ಕಾಯವು ಲಿಂಗದೊಳಡಗಿ, ಪ್ರಾಣವು ಲಿಂಗದೊಳಗಿದ್ದು, ನೀನೆನ್ನ ಕರಸ್ಥಲದೊಳಗೆ ಮೂರ್ತಿಗೊಂಡು, ಕಾರುಣ್ಯವ ಮಾಡು ಗುಹೇಶ್ವರಾ.