•  
  •  
  •  
  •  
Index   ವಚನ - 539    Search  
 
ಜಗತ್‍ಸೃಷ್ಟನಹ ಅಜನ ಕೊಂಬು ಮುರಿಯಿತ್ತು. ಧರೆಯ ಚಂದ್ರಸೂರ್ಯರಿಬ್ಬರೂ ನೆಲಕ್ಕೆ ಬಿದ್ದರಲ್ಲಾ! ಉದಯ ನಿಂದಡೆ ಅಸ್ತಮಾನವಹುದು. ಊರು ಬೆಂದು ಉಲುಹಳಿದುದು. ಇದೇನು ಸೋಜಿಗವೊ! ದೇವ ಸತ್ತ ದೇವಿ ಕೆಟ್ಟಳು, ಆನು ಬದುಕಿದೆನು ಗುಹೇಶ್ವರಾ.
Transliteration Jagat‍sr̥ṣṭanaha ajana kombu muriyittu. Dhareya candrasūryaribbarū nelakke biddarallā! Udaya nindaḍe astamānavahudu. Ūru bendu uluhaḷidudu. Idēnu sōjigavo! Dēva satta dēvi keṭṭaḷu, ānu badukidenu guhēśvarā.
Hindi Translation जगत्सृष्टिकर्ता अज का अहंकार नाश हुआ। धरा के चंद्र सूर्य दोनों धरती पर गिरे। उदय रुका तो अस्तमान हुआ। गाँव जलकर शांत हुआ। यह क्या आश्चर्य है! देव मरा, देवी बिगड़ी, मैं जिया, गुहेश्वरा Translated by: Eswara Sharma M and Govindarao B N
Tamil Translation உலகைப்படைக்கும் பிரம்மனின் கொம்பு முறிந்தது உலகில்தென்படும் சந்திர&சூரியர் நிலத்திலே வீழ்ந்தனரன்றோ! உதிப்பது நிற்பின் அத்தமிக்கும் ஊர் வெந்து ஒலியடங்கியுளது இது என்ன வியப்பு! இறைவன் மறைய, இறைவி அடங்கினள் நான் அமரனானேன் குஹேசுவரனே! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಜನ = ಬ್ರಹ್ಮನ; ಅಸ್ತಮಾನ = ಅಡಗುವಿಕೆ; ಉದಯ = ಜನ್ಮ; ಉಲುಹು ಅಳಿದುದು = (ಎಲ್ಲವೂ) ನಿಶ್ಯಬ್ದವಾಗಿದೆ; ಊರು = ಜಗತ್ತು ಮತ್ತು ದೇಹ; ಕೊಂಬು = "ನಾನು ಸೃಷ್ಟಿಸುವವ" ಎಂಬ ಅಹಂಭಾವ; ಜಗತ್ ಸೃಷ್ಟನಹ = ಜಗತ್ತನ್ನು ಸೃಷ್ಟಿಸುವ ; ದೇವ, ದೇವಿ = ಸೃಷ್ಟಿಗೆ ಆಧಾರವಾದ ಶಿವ-ಶಕ್ತಿಯರು; ಧರೆಯ ಚಂದ್ರಸೂರ್ಯರು = ಧರೆಯಲ್ಲಿ ಕಾಣಬರುವ ಸೂರ್ಯಚಂದ್ರರು, ದೇಹದಲ್ಲಿ ಇಡಾ, ಪಿಂಗಳ ಮಾರ್ಗವಿಡಿದು ಸುತ್ತುತ್ತಿರುವ ಪ್ರಾಣಶಕ್ತಿ; ನೆಲಕ್ಕೆ ಬೀಳು = ನಿಂತುಹೋಗು; ಬೆಂದು = ದಗ್ದವಾಗಿ; ಮುರಿಯಿತ್ತು = ನಾಶವಾಯಿತು; Written by: Sri Siddeswara Swamiji, Vijayapura