Index   ವಚನ - 76    Search  
 
ಬೆಲ್ಲದಿಂದಾದ ಸಕ್ಕರೆ ತವರಾಜಗೂಳ ಇವೆಲ್ಲವು ಅಲ್ಲಿ ಒದಗಿದವಲ್ಲದೆ ಬೇರೆ ಮತ್ತೊಂದರಲ್ಲಿ ಒದಗಿದವೆ? ಇವರಂದವ ತಿಳಿದು ನೋಡಲಾಗಿ ಹಿಂಗದ ದೈವಕ್ಕೆ ಕೊಂಡಾಡಲೇತಕ್ಕೆ? ಸಂದಳಿದ ಭಂಗಂಗೆ ಅದು ನಿಂದಲ್ಲಿಯೆ ತಾನು ನಾರಾಯಣಪ್ರಿಯ ರಾಮನಾಥಾ.