ಲಾಭವ ಕಾಬ ಬೆವಹಾರಿ ನಷ್ಟಕ್ಕೆ ಇಕ್ಕುವನೆ?
ಅದು ತನ್ನ ಸಿಕ್ಕಿಸಿ ಬಹು ತಾನರಿಯ.
ಈ ಉಭಯವ ತಿಳಿದಲ್ಲಿ ಲಾಭ ನಷ್ಟ ದಿವರಾತ್ರಿಯಂತೆ
ಮಾಟ ಕೂಟದ ಒದಗು.
ವಿಶ್ವಾಸದಲ್ಲಿ ಲಾಭ, ಅದು ಹೀನವಾದಲ್ಲಿ ನಷ್ಟ.
ಇಂತೀ ನಷ್ಟ ಲಾಭವ ಬಿಟ್ಟು
ಸುಚಿತ್ತ ನಿರ್ಮಲಾತ್ಮಕನಾಗಿ ಅರಿದು ಕರಿಗೊಳ್ಳಬೇಕು.
ನಾರಾಯಣಪ್ರಿಯ ರಾಮನಾಥನಲ್ಲಿ
ಚಿತ್ತಶುದ್ಧನಾಗಿರಬೇಕು.