ಅವಧಿ ಜ್ಞಾನ ಅಂತರಿಕ್ಷಜ್ಞಾನ ಪವನಜ್ಞಾನ
ಪರಸ್ವರೂಪಜ್ಞಾನ ಪರಬ್ರಹ್ಮಜ್ಞಾನ ಪರತತ್ವಜ್ಞಾನ
ಸ್ವಯಜ್ಞಾನ ಸ್ವಾನುಭಾವಜ್ಞಾನ ಸರ್ವಪರಿಪೂರ್ಣಜ್ಞಾನ
ದಿವ್ಯಜ್ಯಾನವೆಂದು ಸಂಕಲ್ಪಿಸುವಾಗ
ಆ ಆತ್ಮಕ್ಕೆ ಅದು ನಿಜವೊ, ಅದರ ಪರಿಭ್ರಮಣವೊ?
ಸಕಲ ಶಸ್ತ್ರಂಗಳಿಂದ ಕಡಿವಡಿದಂಗ ಆತ್ಮಬಿಡುವಲ್ಲಿ
ಹಲವು ಶಸ್ತ್ರದ ಭೇದವೊ?
ಅಂಗದ ಆಯಧ ಗಾಯದ ಭೇದವೊ?
ಎಂಬುದ ತಿಳಿದು ಪದಪದಾರ್ಥಂಗಳ ಲಕ್ಷಸಿ ನಿರೀಕ್ಷಿಸಿ
ಆರೋಪಿಸಬೇಕು.
ಒಂದು ವಿಶ್ವವಾದಲ್ಲಿ, ವಿಶ್ವ ಒಂದಾದಲ್ಲಿ
ಉಭಯದಲ್ಲಿ ನಿಂದು ತಿಳಿದಲ್ಲಿ
ಗೋರಕ್ಷಪಾಲಕ ಮಹಾಪ್ರಭು
ಸಿದ್ಧ ಸೋಮನಾಥಲಿಂಗವು
ಒಂದೆನಬೇಕು.