•  
  •  
  •  
  •  
Index   ವಚನ - 545    Search  
 
ಕಿಚ್ಚಿನ ದೇವನು, ಕೆಂಡದ ದೇವನು, ಮಾರಿಯ ದೇವನು, ಮಸಣದ ದೇವನು, ತಿರುಕ ಗೊರವನೆಂದು ಅಲ್ಲಲ್ಲಿ ಒಂದೊಂದನಾಡುತ್ತಿಪ್ಪರಯ್ಯಾ. ಈ ಮಾತುಗಳೊಂದೂ ಅಲ್ಲ. ನಾ ನಿಮ್ಮ ಪೂಜಿಸಿ ನಷ್ಟಸಂತಾನವಾಗಿ, ಬಟ್ಟಬಯಲಲ್ಲಿ ಬಿದ್ದು ಕೆಟ್ಟೆನು ಗುಹೇಶ್ವರಾ.
Transliteration Kiccina dēvanu, keṇḍada dēvanu, māriya dēvanu, masaṇada dēvanu, tiruka goravanendu allalli ondondanāḍuttipparayyā. Ī mātugaḷondū alla. Nā nim'ma pūjisi naṣṭasantānavāgi, baṭṭabayalalli biddu keṭṭenu guhēśvarā.
Hindi Translation अग्नि देव, अंगार देव, मारि देव, मसण देव, भिखमंगा, सन्यासी इधर उधर एक एक रूप में खेल रहे हैं। मैं तुम्हारी पूजा करके नष्ट संतान बने, खुले शून्य में गिरकर बिगडा गुहेश्वरा। Translated by: Eswara Sharma M and Govindarao B N
Tamil Translation அனல் கடவுள் தணல் கடவுள் மாரிக் கடவுள், மயானக்கடவுள், பிட்சை, துறவிஎன ஆங்காங்கு ஒவ்வொரு முறையில் கூறிக்கொண்டு இருப்பர் நான் உம்மைப் பூஜித்து பிறப்பு இறப்பிலிருந்து விடுபட்டு, வெட்டவெளியிலே விழுந்து பேரின்பமெய்தினேன் குஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಡುತ್ತಿಪ್ಪರು = ಹೇಳುತ್ತಿರುವರು; ಒಂದೊಂದನು = ಒಂದೊಂದು ರೀತಿ; ಕಿಚ್ಚ ದೇವನು = ಅಗ್ನಿನೇತ್ರವ ತೆರೆದು ಜ್ವಾಲೆಗಳ ಹರಿಸಿ ಕಾಮನನ್ನು ಸುಟ್ಟುರುಹಿದ ದೇವನು; ಕೆಂಡದ ದೇವನು = ಕ್ರೋಧದ ಕೆಂಡದಂತಿರುವ ವೀರಭದ್ರನನ್ನು ಸೃಷ್ಟಿಸಿದ ದೇವನು; ಕೆಟ್ಟೆನು = ನಿರ್ಬಯಲುಗೊಂಡೆನು; ಗೊರವ ದೇವನು = ಬ್ರಹ್ಮಚಾರಿ ಸಂನ್ಯಾಸಿಯ ವೇಷಧರಿಸಿ ತಪಸ್ವಿನಿಯಾದ ಗಿರಿಜೆಯ ಸಂಧಿಸಿದ ದೇವನು; ತಿರುಕದೇವನು = ಭಿಕ್ಷಾಟನೆ ಲೀಲೆಗೈದ ದೇವನು; ನಷ್ಟಸಂತಾನವಾಗು = ಜನ್ಮ-ಮರಣಗಳ ಸಂತಾನ ಇಲ್ಲದವನಾಗು, ಜನ್ಮ ಮರಣಗಳಿಂದ ಪಾರಾಗು; ಬಟ್ಟ ಬಯಲಲ್ಲಿ = ಚಿದ್ಭಯಲರೂಪ ಮಹಾಲಿಂಗದಲ್ಲಿ; ಮಸಣದ ದೇವನು = ಶ್ಮಶಾನವಾಸಿಯಾದ ದೇವನು; ಮಾರಿಯ ದೇವನು = ಪ್ರಳಯಕಾಲದಲ್ಲಿ ಸರ್ವನಾಶ ಮಾಡುವ ದೇವನು, ಅಸುರ-ರಕ್ಕಸರನ್ನೆಲ್ಲ ಚೆಂಡಾಡುವ ಮಹಾಮಾರಿ ದುರ್ಗೆಯ ಪತಿಯಾದ ದೇವನು.; Written by: Sri Siddeswara Swamiji, Vijayapura