•  
  •  
  •  
  •  
Index   ವಚನ - 546    Search  
 
ಕಾಮನ ಕೈ ಮುರಿದಡೆ ಮೋಹ ಮುಂದುಗೆಟ್ಟಿತ್ತು. ಆಮಿಷ ತಾಮಸಧಾರಿಗಳೆಲ್ಲ ಎಳತಟವಾದರು. ಅಕ್ಕಟಾ, ಅಯ್ಯಲಾ, ನಿಮ್ಮ ಕಂಡವರಾರೊ? ಆಳವಿಲ್ಲದ ಸ್ನೇಹಕ್ಕೆ ಮರಣವೆ ಮಹಾನವಮಿ. ಗುಹೇಶ್ವರನನರಿಯದೆ ರಣಭೂಮಿಗಳುಲಿದವು.
Transliteration Kāmana kai muridaḍe mōha mundugeṭṭittu. Āmiṣa tāmasadhārigaḷella eḷataṭavādaru. Akkaṭā, ayyalā, nim'ma kaṇḍavarāro? Āḷavillada snēhakke maraṇave mahānavami. Guhēśvarananariyade raṇabhūmigaḷulidavu.
Hindi Translation काम नाश हुआ तो मोह नाश हुआ। आमिष तामसधारी सब नाश हुए। अक्कटा, अय्या! तुमको देखा किसीने ? सीमा न रहे स्नेह को मरण ही महानवमी गुहेश्वर को न जाने रणभूमी दुःखित हुई ! Translated by: Eswara Sharma M and Govindarao B N
Tamil Translation காமத்தைத் துறப்பின் மோகம் அகன்றது ஆசை அஞ்ஞானம் மிக்கோர் துன்புற்றனர் அடடா, ஐயனே, உம்மைக் கண்டவர் யாரோ? அளவிலா ஆசைக்கு மரணமே பெரும் பேறு குஹேசுவரனை அறியாது சமர்க்கள ஒலியால் நிறைந்தது. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಳವಿಲ್ಲದ ಸ್ನೇಹ = ಗಾಢವಾದ ಆಸಕ್ತಿ, ಅನುರಾಗ; ಆಮಿಷ = ಪ್ರಲೋಭನ, ಬಯಕೆ; ಎಳತಟವಾಗು = ಹಿಂಸೆಗೊಳ್ಳು, ಸೆಳೆತಕ್ಕೆ ಸಿಕ್ಕು ಹಾಳಾಗು; ಕಾಮ = ವಿಷಯಸುಖದ ಆಶೆ; ಕೈ ಮರೆ = ಹತಬಲನಾಗು, ಇಲ್ಲದಾಗು; ತಾಮಸ = ಅಜ್ಞಾನ, ಜಡಭಾವ; ಮುಂದುಗೆಡು = ಗತಿಗೆಡು, ಹಾಳಾಗು, ಇಲ್ಲದಾಗು; ಮೋಹ = ವಿಷಯಗಳಲ್ಲಿ ಆಸಕ್ತಿ, ವಿಷಯಸುಖವ್ಯಾಮೋಹ; ರಣಭೂಮಿಗಳು ಉಲಿದವು = ಜೀವನವೆಂಬ ರಣರಂಗವು ಸಾವು-ನೋವಿನ ಧ್ವನಿಯಿಂದ ತುಂಬಿತು; Written by: Sri Siddeswara Swamiji, Vijayapura