Index   ವಚನ - 27    Search  
 
ಇಷ್ಟಲಿಂಗವ ತೆಕ್ಕೊಂಡಲ್ಲಿ ದೃಷ್ಟವಾಯಿತ್ತೆ ನಿಮಗೆ? ಬಂಧಿಕಾರನ ಬಂಧನವ ಮಾಡೂದು ಲಿಂಗದೇಹಿಗಳಿಗುಂಟೆ ಅಯ್ಯಾ. ಜಗದಲ್ಲಿ ಉಂಡುಂಡು ಕೊಂಡಾಡುವವರಿಗೆ, ಘನಲಿಂಗದ ಶುದ್ಧಿ ಏಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.