•  
  •  
  •  
  •  
Index   ವಚನ - 548    Search  
 
ಆಸುರವಾದುದು ಬೀಸರವಾಯಿತ್ತು. ಬಲ್ಲೆನೊಲ್ಲೆ ನೀ ಕೊಡುವ ವರವನು. ನಾ ಬೇಡಿತ್ತು ನಿನ್ನ ಮುಖದಲಿಲ್ಲ ಗುಹೇಶ್ವರಾ.
Transliteration Āsuravādudu bīsaravāyittu. Ballenolle nī koḍuva varavanu. Nā bēḍittu ninna mukhadalilla guhēśvarā.
Hindi Translation असुरों की इच्छा नाश हुई । जानता हूँ तुम्हारा वर नहीं चाहिए। मैंने जो माँगा तुम्हारे मुँह में नहीं गुहेश्वरा । Translated by: Eswara Sharma M and Govindarao B N
Tamil Translation அசுரர்கள் பெற்ற பலன்கள் அழிந்தனவன்றோ அறிவேன். நீ ஈயும் வரத்தை நான் ஏலேன் நான் வேண்டுவதை உன்னால் ஈய இயலாது குஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಸುರವಾದುದು = ಅಸುರರಿಗೆ ಯೋಗ್ಯವಾದುದು, ಸಕಾಮಭಾವದಿಂದ ಪೂಜಿಸಿ ಪಡೆದ ಫಲ; ನಿನ್ನ ಮುಖದಲ್ಲಿಲ್ಲ = "ಇದನ್ನು ತೆಗೆದುಕೊ" ಎಂದು ಹೇಳಿ ಅದನ್ನು ನನಗೆ ಕೊಡಲು ನಿನಗೆ ಆಗದು; ಬಲ್ಲೇನು = ವರಗಳು ನಶ್ವರವೆಂಬುದನು ಅರಿತಿದ್ದೇನೆ; ಬೀಸರವಾಗು = ನಾಶವಾಗು; ಬೇಡಿತ್ತು = ಬೇಡಿದುದು, ಬೇಡುವುದು; Written by: Sri Siddeswara Swamiji, Vijayapura