ಅತಿರಥ ಸಮರಥರೆನಿಪ ಹಿರಿಯರೆಂಬವರುಗಳೆಲ್ಲ,
ಮತಿಗೆಟ್ಟು ಮರುಳಾದರಲ್ಲಾ!
ದೇವ ಸತ್ತ, ಬ್ರಹ್ಮ ಹೊತ್ತ, ವಿಷ್ಣು ಕಿಚ್ಚ ಹಿಡಿದ.
ಗಂಗೆಗೌರಿಯರಿಬ್ಬರು ಬರು ಮುಂಡೆಯರಾದರು.
ಇದ ಕಂಡು ಬೆರಗಾದೆ ಗುಹೇಶ್ವರಾ.
Art
Manuscript
Music Courtesy:
Video
TransliterationAtiratha samaratharenipa hiriyarembavarugaḷella,
matigeṭṭu maruḷādarallā!
Dēva satta, brahma hotta, viṣṇu kicca hiḍida.
Gaṅgegauriyaribbaru baru muṇḍeyarādaru.
Ida kaṇḍu beragāde guhēśvarā.
Hindi Translationअतिरथ समरथ कहने वीर
मूर्ख बनकर पागल हुए !
देव मरा, ब्रह्म ने उठाया, विष्णु ने आग पकडी
गंगा गौरी दोनों विधवा हुई।
इसे देख चकित हुआ गुहेश्वरा ।
Translated by: Eswara Sharma M and Govindarao B N
English Translation
Tamil Translationபோர்புரிவோர் வீரர், பெரியோர்
அறிவிழந்து மருளடைந்தனரன்றோ!
இறைமறைந்தது, உடலிருந்தவாறே இருந்தது
மனம் தாபம் கொண்டது, ஞானசக்தி இச்சா
சக்திகள் பயனற்றுப் போயினர் இதைக்கண்டு
வியப்புற்றேன் குஹேசுவரனே!
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅತಿರಥರು = ಅಸಾಮಾನ್ಯ ಯೋಧರು; ಇದ = ಸಾಧಕರ ಈ ವಿಚಿತ್ರ ಪರಿಸ್ಥಿತಿಯನ್ನು ; ಕಂಡು = ಎಲ್ಲೆಡೆ ನೋಡಿ, ; ಗಂಗೆಗೌರಿಯರು = ಜೀವನಸಂಗಾತಿಗಳಾದ ಜ್ಞಾನಶಕ್ತಿ-ಇಚ್ಚಾಶಕ್ತಿಗಳು; ದೇವ ಸತ್ತ = ಶಿವದರ್ಶನವಾಗಲಿಲ್ಲ; ಬೆರೆಗಾದೆ = ಅಚ್ಚರಿಪಟ್ಟೆ; ಬ್ರಹ್ಮ ಹೊತ್ತ = ದೇಹವು ಜಡವಾಗಿಯೇ ಉಳಿಯಿತು; ಮತಿಗೆಟ್ಟು = ಶಿವಾನುಭೂತಿಯಿಂದ ವಂಚಿತರಾಗಿ; ಮರುಳಾಗು = ಹುಚ್ಚರಾಗು, ದಿಗ್ಘ್ರಮೆಗೊಳ್ಳು, ಹತಾಶರಾಗು; ಮುಂಡೆಯರಾದರು = ನಿಷ್ಕಲರಾದರು; ವಿಷ್ಣು ಕಿಚ್ಚ ಹಿಡಿದ = ಮನಸ್ಸು ಸಂಸಾರತಾಪಕ್ಕೆ ಒಳಗಾಯಿತು; ಸಮರಥರು = ಮಹಾವೀರರು; ಹಿರಿಯರು = ಶ್ರೇಷ್ಠರು, ಹಿರಿಯ ಸಾಧಕರು; Written by: Sri Siddeswara Swamiji, Vijayapura