Index   ವಚನ - 32    Search  
 
ಊರ್ಧ್ವಮುಖದ ಶಿವಾಲಯದೊಳಗೆ ಮಹಾದೇವರು. ಆ ಮಹಾದೇವರ ಮುಂದಣ ನಂದಿಯ ನೋಟ ವಿಪರೀತ ನೋಡಾ! ಅದು ಬಂದು ಬಂದು ಪರಿವಾರದೇವತೆಗಳ ಮೂಸಿಮೂಸಿ ನೋಡಿತ್ತು ನೋಡಾ! ಆ ನಂದಿ ಆನಂದಲೀಲೆಯಾಡುತ್ತಿದ್ದುದು ಆ ನಂದಿಯ ಆನಂದವ ಕಂಡು ಮಹಾದೇವರು ನಗುತ್ತಿರ್ದಡೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು.