ಕಾಯ ಜೀವವನರಿದೆನೆಂಬವರೆಲ್ಲರೂ
ಹೋದರಲ್ಲಾ ಹೊಲಬುದಪ್ಪಿ.
ಹೆಣ್ಣು ಹೊನ್ನು ಮಣ್ಣಿಗೆ
ಹೋರಾಡುವ ಅಣ್ಣಗಳೆಲ್ಲರೂ
ಬಸವಣ್ಣನ ಮನೆಯ ಬಾಗಿಲಲ್ಲಿ
ಬಂಧಿಕಾರರಾಗಿ ಕಾಯ್ದುಕೊಂಡಿದ್ದು
ಆ ಹೆಣ್ಣು ಹೊನ್ನು ಮಣ್ಣು ತಮ್ಮ
ಕಣ್ಣ ಮುಂದಕೆ ಬಾರದಿದ್ದಡೆ
ತಮ್ಮ ಮನದಲ್ಲಿ ನೊಂದು
ಬೆಂದು ಕುದಿದು ಕೋಟಲೆಗೊಂಡು
ಮತ್ತೆಯೂ ತಾವು ಅರುಹಿರಿಯರೆಂದು
ಬೆಬ್ಬನೆ ಬೆರತುಕೊಂಡಿಪ್ಪವರಿಗೆ
ನಮ್ಮ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.