ಕೊಂಬಿನ ಮೇಲಣ ಬೇಡಂಗೆ
ಶಿವರಾತ್ರಿಯನಿತ್ತನೆಂಬರು;
ಕಾಳಿದಾಸಂಗೆ ಕಣ್ಣನಿತ್ತನೆಂಬರು;
ಮಯೂರಂಗೆ ಮಯ್ಯನಿತ್ತನೆಂಬರು;
ಬಾಣಂಗೆ ಕಯ್ಯನಿತ್ತನೆಂಬುರು;
ಸಿರಿಯಾಳಂಗೆ ಮಗನನಿತ್ತನೆಂಬರು;
ಸಿಂಧುಬಲ್ಲಾಳರಾಯಂಗೆ ವಧುವನಿತ್ತನೆಂಬರು;
ದಾಸಂಗೆ ತವನಿಧಿಯನಿತ್ತನೆಂಬರು.
ಆರಾರ ಮುಖದಲ್ಲಿ ಇದೇ
ವಾರ್ತೆ ಕೇಳಲಾಗದೀ ಶಬ್ದವನು.
ಲಿಂಗವಿತ್ತುದುಳ್ಳಡೆ ಅಚಳಪದವಾಗಬೇಕು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ!
ಅದು ನಿಲದ ವಾರ್ತೆ.
Art
Manuscript
Music
Courtesy:
Transliteration
Kombina mēlaṇa bēḍaṅge
śivarātriyanittanembaru;
kāḷidāsaṅge kaṇṇanittanembaru;
mayūraṅge mayyanittanembaru;
bāṇaṅge kayyanittanemburu;
siriyāḷaṅge magananittanembaru;
sindhuballāḷarāyaṅge vadhuvanittanembaru;
dāsaṅge tavanidhiyanittanembaru.
Ārāra mukhadalli idē
vārte kēḷalāgadī śabdavanu.
Liṅgavittuduḷḷaḍe acaḷapadavāgabēku.
Cikkayyapriya sid'dhaliṅga illa illa!
Adu nilada vārte.