Index   ವಚನ - 78    Search  
 
ನಮ್ಮವರು ಭಕ್ತರಲ್ಲ; ನಮ್ಮವರಿಗೆ ದೇವರಿಲ್ಲ. ನಮ್ಮವರು ಜಂಗಮಕ್ಕೆ ಮಾಡುವರಲ್ಲ; ನಮ್ಮವರು ಜಂಗಮದ ಕೈಯಲ್ಲಿ ಮಾಡಿಸಿಕೊಂಬರು. ನಮ್ಮವರು ನಮ್ಮವರು ಎಂಬ ಶಬ್ದ ಸತ್ತಿತ್ತು. ನಮ್ಮವರಾದ ಪರಿಯ ನಾನಿನ್ನೇನ ಹೇಳುವೆ? ಇದು ಕಾರಣ, ನಮ್ಮವರಿಗೆಯೂ ಇಲ್ಲ, ನನಗಂತೂ ಇಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ!