Index   ವಚನ - 93    Search  
 
ಪ್ರಾಣಲಿಂಗವೆಂದಡೆ ಹೇಳದೆ ಹೋಯಿತ್ತು. ಲಿಂಗಪ್ರಾಣವೆಂದಡೆ ತನ್ನಲ್ಲೆ ಹಿಂಗಿತ್ತು. ಅದನೇನೆಂಬೆನೇನೆಂಬೆನು, ಮೂರು ಲೋಕವೆಲ್ಲ ತೊಳಲಿ ಬಳಲುತ್ತಿದೆ. ಉಭಯಲಿಂಗ ನಾಮ ನಷ್ಟವಾದಡೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬೆ.