•  
  •  
  •  
  •  
Index   ವಚನ - 555    Search  
 
ಆಡಾಡ ಬಂದ ಕೋಡಗ ಹಂದರವನೇರಿತ್ತಲ್ಲಾ! ನೋಡಬಂದವರ ಕಣ್ಣೆಲ್ಲಾ ಒಡೆದವು. ಬೆಣ್ಣೆಯ ತಿಂದವರ ಹಲ್ಲೆಲ್ಲಾ ಹೋದವು! ಇದೇನು ಸೋಜಿಗ ಹೇಳಾ ಗುಹೇಶ್ವರಾ?
Transliteration Āḍāḍa banda kōḍaga handaravanērittallā! Nōḍabandavara kaṇṇellā oḍedavu. Beṇṇeya tindavara hallellā hōdavu! Idēnu sōjiga hēḷā guhēśvarā?
Hindi Translation खेलते खेलते आया बंदर छप्पर पर चढा। देखने आये की आँखे फूट गयीं। माखन खाये के दाँत नाश हुए। यह क्या अचरज है गुहेश्वरा? Translated by: Eswara Sharma M and Govindarao B N
Tamil Translation ஆடி ஆடி வந்த குரங்கு, ஆறுதலத்திலேறியதன்றோ! காணவந்தோர்தம் கண் அகமுகமாயிற்று வெண்ணெயை உண்டவர்தம் பல்லனைத்தும் அகன்றன! இது என்ன வியப்பு குஹேசுவரனே! Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಡಾಡ ಬಂದ = ಆಡಲು ಆಡಲು ಬಂದ, ಪ್ರಾಪಂಚಿಕರಂಗದಲ್ಲಿ ವಿಷಯಗಳೊಂದಿಗೆ ಕ್ರೀಡಿಸಲು ಬಂದ; ಏರಿತ್ತು = ಆರೋಹಿಸಿತ್ತು; ಕಣ್ಣೆಲ್ಲಾ ಒಡೆದವು = ಕಣ್ಣು ಕಾಣದಂತಾದವು; ಕೋಡಗ = ಚಂಚಲವಾದ ಮನಸ್ಸು; ತಿಂದವರು = ಆ ಅಭೇದಜ್ಞಾನವನ್ನು ಪಡೆದ ಜೀವರು; ನೋಡ ಬಂದವರು = ಶಬ್ದಾದಿವಿಷಯಗಳನ್ನು ನೋಡಲು ಈ ವಿಶ್ವರಂಗಕ್ಕೆ ಬಂದವರು, ಶ್ರೋತ್ರಾದಿ ಇಂದ್ರಿಯಂಗಳು; ಬೆಣ್ಣೆ = ಉನ್ಮನಾವಸ್ಥೆಯಲ್ಲಿ ಅನುಭವಕ್ಕೆ ಬರುವ ದಿವ್ಯ ಆನಂದ, ಅಭೇದಜ್ಞಾನ; ಹಂದರವನು = ಷಟ್ ಸ್ಥಲವೆಂಬ ಯೋಗಮಂಟಪವನ್ನು; ಹಲ್ಲು = ನಾನು-ಅನ್ಯ ಎಂಬ ಭೇದಭಾವ, ಭಿನ್ನಬುದ್ದಿ; ಹೋಗು = ಇಲ್ಲದಾಗು; Written by: Sri Siddeswara Swamiji, Vijayapura