Index   ವಚನ - 103    Search  
 
ಮಜ್ಜನದ ಮಾರಿಯೆ ಪತ್ರೆಯ ತಾಪತ್ರಯ ನಿ[ರ್ಮಾ]ಲ್ಯವ ಲಿಂಗಾರ್ಪಿತ ಮಾಡುವವನೇನೆಂಬೆ. ರೂಪಿಲ್ಲದುದನೊಂದು ಶಾಪ ಬಂಧನಕ್ಕೆ ತಂದು ಕೋಪದ ಧೂಪದಾರತಿಯಾದ ತೆರನೆಂತೊ! ಅದು ಬೇಕೆನ್ನದು, ಬೇಡೆನ್ನದು, ಸಾಕೆಂಬುದು ಮುನ್ನಿಲ್ಲವಾಗಿ. ಈ ಪರಿಯ ಭ್ರಮಿತರಿಗೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.