Index   ವಚನ - 108    Search  
 
ಮುಂಡವ ಹೊತ್ತುಕೊಂಡು ಮಂಡಲಕ್ಕೆ ಬಂದಡೆ ಮಂಡಲದ ಹೆಮ್ಮಕ್ಕಳು ಮುಂಡವ ನೋಡುತ್ತಿದ್ದರು, ಇತ್ತ ತಾರು ಮಾಯಿತ್ತು ತೋರು ಮಾಯೆಯೆನುತ್ತ ನೆರೆದು ಮುಂಡವ ಕೊಂಡಾಡುತ್ತಿದ್ದರು. ಇದರ ತಲೆಯೆತ್ತ ಹೋಯಿತ್ತೆಂದಡಲ್ಲಿಯೇ ಅಡಗಿತ್ತು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲೆಂದುದಾಗಿ.