Index   ವಚನ - 129    Search  
 
ಸರದ ಸಾರದ ನಿಸ್ಸಾರಾಯವ ನಿರುತವಲ್ಲೆಂದು ಅರಿತು ಅರಿಯರು ಹಿರಿಯರೆನಿಸಿಕೊಂಬ ನರತರುಗಳು ಇವರೆತ್ತ ಬಲ್ಲರು? ಹಸಿವಿಲ್ಲದೆ ಮುನ್ನಲುಂಡ ಊಟವ ನಸೆಯಿಲ್ಲದೆ ಆಪ್ಯಾಯನವರಿಯರು. ಹುಸಿಯಲಿ ನುಸುಳುವರಿಗೆ ತನ್ನ ವಶಕೆ ತರಲಿನ್ನಿಲ್ಲವಿನ್ನೆಂತೊ? ಭರಿತವೆಂಬರು ಭಾವಕ್ಕಿಂಬಿಲ್ಲ, ಮರೆಯಲ್ಲಿ ಕುಲವ್ಯಸನ ಭ್ರಮೆಯವರರಿವಿನಲ್ಲಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಎಂಬರು.