Index   ವಚನ - 10    Search  
 
ಆವ ಕಾಲದೊಳಾದಡೂ ಆವ ದೇಶದೊಳಾದಡೂ ತನ್ನ ಲಲಾಟಲಿಖಿತ ಪ್ರಾರಬ್ಧಕರ್ಮ ಉಂಡಲ್ಲದೆ ತೀರದು; ದೈವತಾಪ್ರಾರಬ್ಧ ಭೋಗಿಸಿದಲ್ಲದೆ ಕ್ಷಯವಾಗದು; ದೇವ ದಾನವ ಮಾನವರಿಗಾದಡೂ ನಿವಾರಿಸಬಾರದು. ತನು ತಾನಲ್ಲ, ತನ್ನದಲ್ಲ. ಇದು ಮಾಯೆಯೆಂದರಿದು ಸುಖಿಯಾದಾತ ನೀನೆ, ಸಿಮ್ಮಲಿಗೆಯ ಚೆನ್ನರಾಮಾ!