Index   ವಚನ - 14    Search  
 
ಇಂದ್ರಿಯಂಗಳೊಡಗೂಡಿ ಬಹಿರ್ಮುಖನಾಗಿ ವಿಷಯಂಗಳಲ್ಲಿ ಆಸಕ್ತಿಯುಳ್ಳವನು ಅಂತರ್ಮುಖ ರೂಪನಪ್ಪ, ಪ್ರತ್ಯಗಾತ್ಮನನೆಂತೂ ಕಾಣಲರಿಯೆನು. ಮೇರುಗಿರಿಯ ಕಂಡೆಹೆನೆಂದು ತೆಂಕಮುಖನಾಗಿ ನಡೆದು ಮೇರುಗಿರಿಯ ಕಾಣಲರಿಯನೆಂತಂತೆ, ಸಕಲ ವಿಷಯಾಸಕ್ತಿಯ ಬಿಟ್ಟು ನಿರ್ವಿಷಯಿಯಾಗಿ ನಿಜದಲ್ಲಿ ನಿಂದ ನಿಲವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.